Skip to content
Lyric
Dive
Public playlists
My playlists
Search
Sign in
Aadisinodu Beelisinodu
G. K. Venkatesh, P. B. Sreenivos
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಗುಡಿಸಲೇ ಆಗಲಿ, ಅರಮನೆ ಆಗಲಿ ಆಟ ನಿಲ್ಲದು
ಹಿರಿಯರೇ ಇರಲಿ, ಕಿರಿಯರೆ ಬರಲಿ ಭೇದ ತೋರದು
ಕಷ್ಟವೋ, ಸುಖವೋ ಅಳುಕದೆ ಆಡಿ ತೂಗುತಿರುವುದು... ತೂಗುತಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರೂ ದೀಪವು ಮನೆಗೆ ಬೆಳಕ ತರುವುದು... ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ... ಕೊನೆಯಾಗುವುದೇ
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು... ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು