Skip to content
Lyric
Dive
Public playlists
My playlists
Search
Sign in
Mareyalaguthilla
Vishal Thimmaiah & Sadwini Koppa
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಈ ನನ್ನ ಕನಸು ನನಸಾಗಿರಲು ನೀ ಕಾರಣ
ತುಟಿ ಅಂಚಲಿ ನಗೆಯನ್ನು ಬೀರಲು ನೀ ಕಾರಣ
ಮರೆಯಾಗಲು ಪ್ರೀತಿಯ ಬೆಸುಗೆ ನೀ ಕಾರಣ
ಆ ನನ್ನ ಕನಸು ಕಣ್ಮರೆಯಾಗಲು ನೀ ಕಾರಣ
ಮನಸು ಮೌನವ ಮುರಿಯುತಿದೆ
ನಿನ್ನ ನೋಡಲು ಬಯಸುತಿದೆ
ಹೃದಯ ಬಡಿತವ ನಿಲ್ಲಿಸದೆ
ಕಣ್ಣಾರೆಪ್ಪೆಯ ಮುಚ್ಚಿಸದೆ
ನಿನ್ನಿಂದ ಬದುಕಿದೆ ಈ ನನ್ನ ಜೀವ
ನೀ ತಂದ ನಗುವಲ್ಲೆ ಮರೆತಿದೆ ನೋವ
ನೀ ದೂರ ಹೋದರೆ ಅಳುವುದು ಮನಸು
ನೀ ಇಲ್ಲವಾದರೆ
ನಿನ್ನನ್ನು ಮರೆಯಲಾಗುತ್ತಿಲ್ಲ
ನೋವನು ತಡೆಯಲಾಗುತ್ತಿಲ್ಲ
ಮೌನ ಮುರಿಯುತ್ತಿಲ್ಲ
ನೀನಿಲ್ಲದೆ ಬದುಕಲಾಗುತ್ತಿಲ್ಲ
ಕಣ್ಣ ಮುಚ್ಚಿ ಕುಳಿತೆ ನಾನು
ಎದುರಲಿ ಬಂದು ನಿಂತೆ ನೀನು
ಪ್ರೀತಿ ನಂಬಿ ಬಂದೆ
ನೀನು ಮೋಸ ಮಾಡಿ ಹೋದೆ
ಜೀವ ಹೂ... ವಾಗಿದೆ
ಜೀವ ಹೂ... ವಾಗಿದೆ
ನಾನು ನೋಡೋದಕ್ಕೆ ಮಾತ್ರ ಒರಟ ಕಣೇ
ನನ್ನ ಮನಸ್ಸು ತುಂಬಾನೇ ಮೃದುವು ಕಣೇ
ನನ್ನ ಪ್ರೀತಿಯ ಬೊಂಬೆಯು ನೀನೇ ಕಣೇ
ನೀನಿಲ್ಲದ ಪ್ರೀತಿಯು ಬೇಡ ಕಣೇ
ಓ ನನ್ನ ಪ್ರೇಯಸಿ, ನನ ಕೊಲ್ಲೋ ರಾಕ್ಷಸಿ
ನಗುವಲ್ಲೇ ಕಾಡಿಕೊಳ್ಳೋ ನೀನನ್ನ ಮೋಹಿನಿ
ನೀ ನನ್ನ ಕಣ್ಮಣಿ ನನ್ನ ಕನಸಿನ ರಾಣಿ ನೀ
ನಿನ್ನಿಂದ ಹುಟ್ಟುತ್ತಿದೆ ಕಣ್ಣಿನಲ್ಲಿ ಇಬ್ಬನಿ
ಕನಸಲೂ ನನಸಲೂ ನನ್ನ ಜೊತೆಗೆ ಇರುವೇ ನೀ
ನಗುವಲೂ ಅಳುವಲೂ ನಿನ್ನ ಜೊತೆಗೆ ಇರುವೆ ನಾ
ನಿನ್ನ ಉಸಿರು ನಾನೇ ನಾನೇ
ನನ್ನ ಉಸಿರು ನೀನೇ
ನಿನ್ನನ್ನು ಮರೆಯಲಾಗುತ್ತಿಲ್ಲ
ನೋವನು ತಡೆಯಲಾಗುತ್ತಿಲ್ಲ
ಮೌನ ಮುರಿಯುತ್ತಿಲ್ಲ
ನೀನಿಲ್ಲದೆ ಬದುಕಲಾಗುತ್ತಿಲ್ಲ
ಕಣ್ಣ ಮುಚ್ಚಿ ಕುಳಿತೆ ನಾನು
ಎದುರಲ್ಲಿ ಬಂದು ನಿಂತೆ ನೀನು
ಪ್ರೀತಿ ನಂಬಿ ಬಂದೆ
ನೀನು ಮೋಸ ಮಾಡಿ ಹೋದೆ
ಜೀವವೇ, ನೀ ನನ್ನ ಮರೆತರೇ ಇರುವುದೇ ಈ ನನ್ನ
ಜೀವನ, ನಿನ್ನಿಂದ ದೂರವೇ ಹೋಗದೆ ಈ ಜೀವ
ಸಂಗಾತಿಯಾಗುವೆ ನಿನ್ನ ಜೀವನ ಕಥೆಗೆ
ಜೊತೆಯಾಗಿಯೇ ನಿನ್ನ ಭಾವನೆಗಳಿಗೆ
ನಾ ನಿನಗಾಗಿಯೇ ನೆರಳಾಗುವೆ
ನಿನಗಾಗಿಯೇ ನಗುವಾಗುವೆ ನಾನು
ಕಣ್ಣಿನಲ್ಲಿ ಕೊಲ್ಲುವೆ ನನ್ ಕನಸಿನಲ್ಲಿ ಕಾಡುವೆ
ಆ ನಿನ್ನ ಮಾತು ಸಾಕು ಬೇರೆ ಏನು ಬೇಡ
ನಾ ಅವಳಿಗಾಗಿ ಕಾದಿದ್ದೆ parkನಲ್ಲಿ mallನಲ್ಲಿ roadನಲ್ಲಿ ಒಬ್ಬನೇ ಅಂದು
ಇನ್ನೇನು ಬೇಕು
ಮಧ್ಯರಾತ್ರಿ ಬಂದಾಯ್ತು ಕನಸುಗಳು ಶುರುವಾಯ್ತು
ದೇವತೆ ನೀ ನನ್ನ ಕನಸಿನಲ್ಲಿ ಎಷ್ಟು ಚೆನ್ನ
ಇನ್ನೂ ನೂರು ಜನ್ಮ ಒಂದಾಗಿ ಸೇರಿ ಬಾಳೋ ಆಸೆ
ಎಂದೂ ಕಮ್ಮಿ ಆಗೋದಿಲ್ಲ ನಿನ್ನ ಮೇಲೆ ಇಷ್ಟ ಅಂತ ಹೇಳಕ್ಬಂದೆ
ಕಷ್ಟ ಕೊಟ್ಟು ತಳ್ಳಿ ಹೋದೆ
ಇಷ್ಟ ಆದ್ರೆ take care
ಕಷ್ಟ ಕೊಟ್ರೆ don't care
ಹೆಜ್ಜೆ ಮೇಲ್ ಹೆಜ್ಜೆ ಇಟ್ಟು
ನನ್ನ ಪ್ರೀತಿ ಜೀವ ಕೊಟ್ಟು
ಪೊಗರು ಹುಡುಗಿ ನನ್ನ ಬಿಟ್ಟು ಹೋಗಬೇಡ ನೋವ ಕೊಟ್ಟು
ಜೊತೆಗೆ ಬಾರೆ ನಂಬಿಕೆ ಇಟ್ಟು ನೋಡ್ಕೋತೀನಿ ಪ್ರಾಣಕೊಟ್ಟು
ರಾಕ್ಷಸಿಯೇ
ನಿನ್ನನ್ನು ಮರೆಯಲಾಗುತ್ತಿಲ್ಲ
ನೋವನು ತಡೆಯಲಾಗುತ್ತಿಲ್ಲ
ಮೌನ ಮುರಿಯುತ್ತಿಲ್ಲ
ನೀನಿಲ್ಲದೆ ಬದುಕಲಾಗುತ್ತಿಲ್ಲ
ದೇವರ ಬಳಿಯೂ ಹೋದೆ ನಾನು
ನಿನ್ನ ಮನದ ತುಂಬಾ ನೆನೆದು
ಪ್ರೀತಿ ಬರಲು ಎಂದು ಇನ್ನೂ ಬೇಡುತಿರುವೆ ನಾನು