Skip to content
Lyric
Dive
Public playlists
My playlists
Search
Sign in
Usire
Vijay Prakash
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಉಸಿರೇ ಮೆಲ್ಲ ಮಾತನಾಡಿದೆ
ಹೃದಯ ರಾಯಭಾರ ಮಾಡಿದೆ
ಕನಸೇ ತೋಳಿನಲ್ಲಿ ತೂಗುತಾ
ಖುಷಿಯು ಭಾವಚಿತ್ರ ಬೇಡಿದೆ
ನಿನಗಷ್ಟೆ ಗೊತ್ತು ನನದೆಲ್ಲ ಮೌನ
ಹೇಳು ಇದಕೇನು ಕಾರಣ?
ಹೊಸದಾಯ್ತು ನೋಡು, ಪಟದಲ್ಲಿ ಬಣ್ಣ
ಜೀವ ಗರಿ ಬಿಚ್ಚೋ ಈ ಕ್ಷಣ
ಓ ಮುದ್ದಾದ ಒಂದು ಸಿಹಿ ಸುದ್ದಿ ಉಂಟು
ಮುಖದ ಕಾಂತಿಯಲಿ
ಓಡಾಡಿದಂತೆ ನಂದಾ ದೀಪ ಒಂದು
ನಿನದೇ ರೂಪದಲಿ
ನನ್ನೆಲ್ಲಾ ಕಾಳಜಿ ತೋರುವೆ
ಓ ನನ್ನ ಜೀವದ ಜೀವವೇ
ಸಂಗಾತ ನಾನಲ್ಲವೇ
ಕವಿತೆ ಒಂದು ಕೈಯ್ಯ ಚಾಚಿದೆ (ಚಾಚಿದೆ, ಚಾಚಿದೆ)
ಕವಿದ ಮೋಡ ಮಾಯವಾಗಿದೆ
ಅಭಯ ರಾಗವನ್ನು ಕೇಳಲು (ಕೇಳಲು, ಕೇಳಲು)
ಉಭಯ ಜೀವ ತಾಳ ಹಾಕಿದೆ (ಹಾಕಿದೆ)
ನಸುಕಾಯ್ತು ನೋಡು ತೆರೆಸುತ್ತ ಕಣ್ಣ
ನೀನೇ ಇದಕೆಲ್ಲ ಕಾರಣ
ಇರಲಿಲ್ಲ ಬಾಳು ಇದಕಿಂಥ ಚೆನ್ನ
ಹೇಳು ಇದಕ್ಯಾರು ಕಾರಣ