Skip to content
Lyric
Dive
Public playlists
My playlists
Search
Sign in
Maaya Ganga
Armaan Malik
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಮಾಯಗಂಗೆ ಮಾಯಗಂಗೆ ಮೌನಿಯಾದಳೇ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ನಾನೇ ಗಂಗೆಯೋ, ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿ ಹೋಕನಾ
ಅನ್ನೋ ಅಚ್ಚರಿ ಆಗಿರೋ ಯೋಗ
ಪುಟ್ಟ ದೋಣಿ ಒಂದ್ದು ಸುಳಿಗೆ ಸಿಕ್ಕಿಕೊಂಡ ಹಾಗಿದೆ ಓಹೋಹೋ
ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ ಓಹೋ ಓಹೋ
ಮಾಯಗಂಗೆ ಮಾಯಗಂಗೆ ಮೌನಿಯಾದಳೇ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ಆ ಬಾನೆತ್ತರ ಈ ಗೋಪುರ ವಾಲೋ ತರ ಹೇ ಹೇ ಹ
ಏಳು ಸ್ವರ ಈ ಪಾಮರ ಕೇಳೋ ತರ ಹೇ ಹೇ ಹೇ
ನಾನೀಗ ಅವಳ ಹೆಜ್ಜೇನ ನೋಡುತಾ ಸಾಗಿದೆ
ಈ ಪಾದ ಹೋಗೋ ಗುರಿನೇ ಕಾಣದೆ
ದಟ್ಟ ಬೆಳಕಲಿ ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಮತ್ತೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
ಮಾಯಗಂಗೆ ಮಾಯಗಂಗೆ ಮೌನಿಯಾದಳೇ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ಈ ಗೂಡಂಗಡಿ ಚಹಾ ಪುಡಿ ಮಾತಾಡಿದೆ ಹೇ ಹೇ ಹೇ
ಏನಾಯಿತು ಹೇಗಾಯಿತು ಹೇಳ್ ಎಂದಿದೆ ಹೇ ಹೇ ಹೇ
ಆ ಕಣ್ಣ ಒಳಗೆ ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ
ಮಾಯಗಂಗೆ ಮಾಯಗಂಗೆ ಮೌನಿಯಾದಳೇ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ