Skip to content

Enendu Naa Helali

Popularity · Low

YouTube

Searching YouTube...

Lyrics

ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ ಹೋ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ ಜೇನುಗಳೆಲ್ಲಾ ಅಲೆಯುತ ಹಾರಿ ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ ಹನಿಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವಾ ಕೆಸರಿನ ಹೂವು ವಿಷದಾ ಹಾವು ಭಯವಿಲ್ಲಾ ಭಯವಿಲ್ಲಾ ಭಯವಿಲ್ಲಾ ಚೆಲುವಿನದೆಲ್ಲಾ ರುಚಿಸುವುದೆಲ್ಲಾ ಕಂಡು ಬಂದಾಗ ಬೇಕೆನ್ನುವಾ ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ ಪ್ರಾಣಿಗಳೇನು, ಗಿಡ ಮರವೇನು ಬಿಡಲಾರ ಬಿಡಲಾರ ಬಿಡಲಾರ ಬಳಸುವನೆಲ್ಲಾ ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವಾ ನುಡಿಯುವುದೊಂದು ನಡೆಯುವುದೊಂದು ಎಂದೆಂದೂ ಎಂದೆಂದೂ ಎಂದೆಂದೂ ಪಡೆಯುವುದೊಂದು ಕೊಡುವುದು ಒಂದು ಸ್ವಾರ್ಥಿ ತಾನಾಗಿ ಮೆರೆದಾಡುವಾ ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ ಹೋ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ ಕೊನೆಯೆಲ್ಲಿ ಕೊನೆಯೆಲ್ಲಿ