Skip to content
Lyric
Dive
Public playlists
My playlists
Search
Sign in
Neene Nananthe
Arjun Janya
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ನಾನೇ ನೀನಂತೆ ನೀನಂತೆ
ನೀನೇ ನಾನಂತೆ ನಾನಂತೆ
ಜೀವಾ ಒಂದೇನೆ ಹೃದಯ ಎರಡು (ಎರಡು)
ನಮ್ಮ ನಡುವೆ ಬರಲಿ
ನೂರು ಮುನಿಸು ಜಗಳ
ಹಾಗೆ ಇರಲಿ ಪ್ರೀತಿ ಸೊಗಡು (ಸೊಗಡು)
ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ
ನಿನ್ನ ನಗು ಎಲ್ಲದಕ್ಕೂ ಪರಿಹಾರ
ನನ್ನಯ ನಾಳೆ ನಿನ್ನಯ ಪಾಲೆ
ನನ್ನಾ ಬದುಕೆ ನಿನ್ನದು ಗೆಳತಿ
ಕಾಯುವೆ ನಾನು ರೆಪ್ಪೆಯ ಹಾಗೆ
ಜನುಮ ಪೂರಾ ನಿನ್ನನ್ನೇ
ಕೋರುವೆ ನಿನ್ನ ಗಾಳಿಯ ಹಾಗೆ
ಉಸಿರು ಇರೋ ತನಕಾನೆ
ನಾನೇ ನೀನಂತೆ ನೀನಂತೆ
ನೀನೇ ನಾನಂತೆ ನಾನಂತೆ
ಜೀವಾ ಒಂದೇನೆ ಹೃದಯ ಎರಡು (ಹೃದಯ ಎರಡು)
ಬದುಕಿನ ಕೊರತೆಯನು
ತುಂಬಿಂದ ನಾಯಕಿಯೇ
ನಿನ್ನದೆ ಮುನ್ನುಡಿಯೇ
ನಲ್ಮೆಯ ಬಾಳಿಗೆ
ಮನಸಿನ ಮಹಡಿಯಲಿ
ನಿನ್ನದೇ ಮುಗುಳುನಗೆ
ಕನಸಿನ ದಾರಿಯಲಿ
ನಿನ್ನದೇ ದೀವಿಗೆ
ನಿನ್ನ ಒಲವಾ ಕರೆಗೆ ಕೊಡುವೆ ಪೂರ್ತಿ ಸಮಯಾ
ನನ್ನ ಕೊರಳಾ ಬಳಸಿ ಹೇಳು ಎಲ್ಲಾ ವಿಷಯಾ
ನನ್ನಯ ಕೋಪ ನನ್ನಯ ತಾಳ್ಮೆ
ಎಲ್ಲಾ ನಿನ್ನ ವಶವೇ ಗೆಳತಿ
ಕಾಯುವೆ ನಾನು ರೆಪ್ಪೆಯ ಹಾಗೆ
ಜನುಮ ಪೂರಾ ನಿನ್ನನ್ನೇ
(ಹೊ ಕಾಯುವೆ ನಾನು ರೆಪ್ಪೆಯ ಹಾಗೆ)
ಕೋರುವೆ ನಿನ್ನ ಗಾಳಿಯ ಹಾಗೆ
ಉಸಿರು ಇರೋ ತನಕಾನೆ
(ಹೊ ಕೋರುವೆ ನಿನ್ನ ಗಾಳಿಯ ಹಾಗೆ)
ನೀನು ಹತ್ತಿರ ಇದ್ದರು ಹುಡುಕುವೆ ನಿನ್ನನೇ
ಅಂತ ಪರಿ ಸೆಳೆತ ನೀನು ಇನಿಯ
ನಿನ್ನ ಬದಲು, ಬೇರೇನು, ಸಿಕ್ಕರೂನು ಒಪ್ಪೆನೂ
ನೀನೇ ನನ್ನ ನಾಡಿಮಿಡಿತ ಗೆಳೆಯಾ
ಕಡಲ ಅಲೆಯಾ ಹಾಗೆ, ನೀನು ನನ್ನ ಒಳಗೆ
ರಾತ್ರಿ ಸುರಿದಾ ಮಳೆಯ, ಸೊಬಗು ನೀನು ನನಗೆ
ನೋವಿಗೆ ಮದ್ದು ನಿನ್ನಯ ಸ್ಪರ್ಶ
ನಿನ್ನಾ ನೆನಪೇ ನನಗೆ ಹರುಷ
ಸೋಲುವೆ ನಿನ್ನ ಪ್ರೀತಿಯ ಮುಂದೆ
ಇಡದೆ ಯಾವ ಲೆಕ್ಕಾನೆ
ದೇವರ ಮುಂದೆ ಬೇಡುವೆ ನಾನು
ಏಳೇಳು ಜನುಮ ನಿನ್ನನ್ನೇ
ನಾನೇ ನೀನಂತೆ ನೀನಂತೆ
ನೀನೇ ನಾನಂತೆ ನಾನಂತೆ
ಜೀವಾ ಒಂದೇನೆ ಹೃದಯ, ಎರಡು