Skip to content
Lyric
Dive
Public playlists
My playlists
Search
Sign in
Besarada Daariyali
C. Aswath
Popularity · Low
+
Original
0
0
YouTube
Searching YouTube...
Lyrics
Original
Translation
Bilingual
ಬೇಸರದ ದಾರಿಯಲಿ ಹೂ ತಳೆದ ಮರ ನೀನು
ಗಾಳಿಯಲಿ ಹಾಯಿಗೈ ನಿನ್ನ ರೆಂಬೆ
ಬಿಸಿಲಿನಲಿ ಬಸವಳಿದು ಬಾಯಾರಿ ಬಂದಿರುವೆ
ಬಿಸಿಲಿನಲಿ ಬಸವಳಿದು ಬಾಯಾರಿ ಬಂದಿರುವೆ
ಹಸಿರು ಸೀರೆಯಾ ನನ್ನ ಕಣ್ಣ ಗೊಂಬೆ
ಬೇಸರದ ದಾರಿಯಲಿ ಹೂ ತಳೆದ ಮರ ನೀನು
ಗಾಳಿಯಲಿ ಹಾಯಿಗೈ ನಿನ್ನ ರೆಂಬೆ
ಬಾ ಎಂದು ಕೂಗುತಿದೆ ಮರೆಯಲ್ಲಿ ಗೊರವಂಕ
ಮೇಲೆ ಹಸಿರಾಕಾಶ ಹೂವೆ ತಾರೆ
ಬಾ ಎಂದು ಕೂಗುತಿದೇ ಮರೆಯಲ್ಲಿ ಗೊರವಂಕ
ಮೇಲೆ ಹಸಿರಾಕಾಶ ಹೂವೆ ತಾರೆ
ಬೀಸುತಿದೆ ತಂಗಾಳಿ ಮರದ ಹೂವು ಉದುರುತಿದೆ
ನೆರಳಿಗೂ ಹೂಬಣ್ಣ ಮರದ ಕೆಳಗೆ
ಬೇಸರದ ದಾರಿಯಲಿ ಹೂ ತಳೆದ ಮರ ನೀನು
ಗಾಳಿಯಲಿ ಹಾಯಿಗೈ ನಿನ್ನ ರೆಂಬೆ
ಬಿಸಿಲಿನಲಿ ಬಸವಳಿದು ಬಾಯಾರಿ ಬಂದಿರುವೆ
ಹಸಿರ ಸೀರೆಯಾ ನನ್ನ ಕಣ್ಣ ಗೊಂಬೆ
ಯಾರ ಸಂಕಲ್ಪಕೋ ಅರಳಿರುವ ಹಸಿರು ಕೊಡೆ
ತಂಗಾಳಿ ಜೋಕಾಲಿ ಬಿಸಿನೊಳಗೆ
ಯಾರ ಸಂಕಲ್ಪಕೋ ಅರಳಿರುವ ಹಸಿರು ಕೊಡೆ
ತಂಗಾಳಿ ಜೋಕಾಲಿ ಬಿಸಿನೊಳಗೆ
ಶತಕೋಟಿ ಜೀವಕ್ಕೆ ಉಸಿರಾದ ತಾಯವ್ವ
ಶತಕೋಟಿ ಜೀವಕ್ಕೆ ಉಸಿರಾದ ತಾಯವ್ವ
ಮರೆತ ಮಮತೆಯಾ ನೆರಳು ಬಯಲಿನೊಳಗೆ
ಬೇಸರದ ದಾರಿಯಲಿ ಹೂ ತಳೆದ ಮರ ನೀನು
ಗಾಳಿಯಲಿ ಹಾಯಿಗೈ ನಿನ್ನ ರೆಂಬೆ
ಬಿಸಿಲಿನಲಿ ಬಸವಳಿದು ಬಾಯರಿ ಬಂದಿರುವೆ
ಹಸಿರ ಸೀರೆಯಾ ನನ್ನ ಕಣ್ಣ ಗೊಂಬೆ
ಬೇಸರದ ದಾರಿಯಲಿ ಹೂ ತಳೆದ ಮರ ನೀನು
ಗಾಳಿಯಲಿ ಹಾಯಿಗೈ ನಿನ್ನ ರೆಂಬೆ