Skip to content
Lyric
Dive
Public playlists
My playlists
Search
Sign in
Savira Nadigaligella
Shankar Mahadevan
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಸಾವಿರ ನದಿಗಳಿಗೆಲ್ಲ ಒಂದೇನೆ ಸಾಗರ
ಸಾವಿರ ಋತುಗಳಿಗೆಲ್ಲ ಒಂದೇನೆ ನೇಸರ
ತಿಳಿಯದಲೇ ಜಾರೋ, ಜೊತೆ ಸೇರೋ ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?
ಪ್ರತಿ ಹೂವಿನ ಸಂಭಾಷಣೆ ಕೇಳುವುದು, ಚಿಟ್ಟೆಗೆ ಮಾತ್ರ
ಪ್ರತಿ ಇಬ್ಬನಿ ಸಂಗೀತವೂ ಕೇಳುವುದು, ಚಿಗುರೋಡೆವ ಎಲೆಗೆ ಮಾತ್ರ
ಹೃದಯಗಳ ತವಕಗಳೇ ಬೇರೆ
ಸಾವಿರ ನದಿಗಳಿಗೆಲ್ಲ ಒಂದೇನೆ ಸಾಗರ
ಸಾವಿರ ಋತುಗಳಿಗೆಲ್ಲ ಒಂದೇನೆ ನೇಸರ
ತಿಳಿಯದಲೇ ಜಾರೋ ಜೊತೆ ಸೇರೋ ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?
ಪ್ರತಿ ಜೇನಿನ ಹನಿಯೆಲ್ಲವೂ ಗೂಡಾಗುವ ಆಸೆಗೆ ಮಾತ್ರ
ಪ್ರತಿ ಮೀನಿನ ತುಂಟಾಟವೂ ಕಾಣುವುದು ಮುಳುಗೇಳುವ ಅಲೆಗೆ ಮಾತ್ರಾ
ಮನಸುಗಳ ಮಿಡಿತಗಳೆ ಬೇರೆ
ಸಾವಿರ ನದಿಗಳಿಗೆಲ್ಲ ಒಂದೇನೆ ಸಾಗರ
ಸಾವಿರ ಋತುಗಳಿಗೆಲ್ಲ ಒಂದೇನೆ ನೇಸರ
ತಿಳಿಯದಲೇ ಜಾರೋ ಜೊತೆ ಸೇರೋ ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?