Skip to content
Lyric
Dive
Public playlists
My playlists
Search
Sign in
Kaverige Kalungara
K. S. Chitra, Koti & S. P. Balasubrahmanyam
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ಕೊಡಿಸಿ
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ಕೊಡಿಸಿ
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ
ಓ ಕನ್ನಡದ ಹೆಣ್ಣೇ ನಿನಗೆ ಕೋಟಿನಮನ
ನಮ್ಮ ಪ್ರೀತಿಗೆರಡೇ ಅಕ್ಷರ
ಅದರಾಳ ಗೌರಿಶಂಕರ
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ
ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೇ
ಚಿನ್ನಾ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ
ನೀನು ನಿಂತಾಗ ಬೇಲೂರಿನಾ ಬೊಂಬೆಯು
ಮೆಲ್ಲ ನಡೆದಾಗ ಮೈ ನೆನೆದ ಆಗುಂಬೆಯು
ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ
ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ
ಪ್ರತಿ ಜನ್ಮ ಪ್ರೀತಿಗಾಗಿ, ಹುಟ್ಟಿ ಬರುವೆ ನಿನ್ನವನಾಗಿ
ಪ್ರತಿ ಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ
ಓ, ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ
ನಮ್ಮ ಪ್ರೀತಿಗೆರಡೇ ಅಕ್ಷರ
ಅದರಾಳ ಗೌರಿಶಂಕರ
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ
ನಿನ್ನ ಆಸೆ ಅನ್ನೋ ರಂಗನಾ ತಿಟ್ಟಿನ ಹಕ್ಕಿ ನಾ
ನಿನ್ನ ಅಂದ ಅನ್ನೋ ನಾಗರ ಹೊಳೆಯಲ್ಲಿ ಅವಿತೆ ನಾ
ನಿನ್ನ ಸ್ಪರ್ಶಾನೇ ಸೈಹ್ಯಾದ್ರಿ ತಂಗಾಳಿಯು
ನಿನ್ನ ನಗುವೆಲ್ಲ ನರ್ತಿಸುವ ಕಾರಂಜಿಯು
ನಿನ್ನ ಹೃದಯಾನೆ ಪ್ರತಿಧ್ವನಿಸೂ ಆ ಗೊಮ್ಮಟ
ನಿನ್ನ ಮನಸೊಂದು ಕರುನಾಡಿನ ಭೂಪಟ
ಪ್ರತೀ ಜನ್ಮ ಪ್ರೀತಿಗಾಗಿ
ಹುಟ್ಟಿ ಬರುವೆ ನಿನ್ನವನಾಗಿ
ಪ್ರತೀ ಜನ್ಮ ಆಸರೆಗಾಗಿ
ಹುಟ್ಟಿ ಬರುವೆ ಹಾಯಾಗಿ
ಓ, ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ
ನಮ್ಮ ಪ್ರೀತಿಗೆರಡೇ ಅಕ್ಷರ
ಅದರಾಳ ಗೌರಿಶಂಕರ
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ಕೊಡಿಸಿ
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ
ಓ ಕನ್ನಡದ ಹೆಣ್ಣೇ ನಿನಗೆ ಕೋಟಿನಮನ
ನಮ್ಮ ಪ್ರೀತಿಗೆರಡೇ ಅಕ್ಷರ
ಅದರಾಳ ಗೌರಿಶಂಕರ
ಅದರಾಳ ಗೌರಿಶಂಕರ