Skip to content
Lyric
Dive
Public playlists
My playlists
Search
Sign in
Vinanthi Madalilla
Shaan, Shreya Ghoshal
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
ನೀನಾದೆ ನನ್ನ ಬಾಳ ರಥ ಸಾರಥಿ
ನಿನ್ನೊಲವಿಗೆ ನಾನಾದೆ ಎಂದೋ ಶರಣಾಗತಿ
ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
ಗೊತ್ತಿಲ್ಲ ಹೇಗೆ ಬಂದೆ ಸದ್ದನ್ನೆ ಮಾಡದಂತೆ
ತುಂಬಾನೆ ಖಾಲಿ ಇರುವ ಈ ಹೃದಯದೂರಿಗೆ
ನನ್ನೂರು ಪ್ರೇಮಲೋಕ ರುಜುವಾತು ಬೇರೆ ಬೇಕ
ನಾ ಬಂದೆ ಕೇಳೆ ಚಲುವೆ ಹಿಡಿಯಷ್ಟು ಪ್ರೀತಿಗೆ
ಕಣ್ಣ ಈ ಮೌನ ಅಕ್ಷರ ಒಮ್ಮೆ ನೀ ಓದು ಸುಂದರ
ನಿನ್ನಧರದಿ ನೀ ಮಾಡು ಅದನು ಭಾಷಾಂತರ
ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
ಶ್ರೀಮಂತನಾದೆ ನಾನು ಶ್ರೀಮಂತಳಾದೆ ನೀನು
ಒಲವೆಂಬ ಮುತ್ತು ರತ್ನ ನಮ್ಮ ಕೈಗೆ ಸೇರಿದೆ
ಒಮ್ಮೊಮ್ಮೆ ನೋಟದಿಂದ ಇನ್ನೊಮ್ಮೆ ಮಾತಿನಿಂದ
ಮತ್ತೊಮ್ಮೆ ಪ್ರೀತಿಯಿಂದ ಮನಸೂರೆ ಮಾಡಿದೆ
ಸಿಕ್ಕಂತೆ ಸಾವಿರ ವರ
ಮೊಗ್ಗು ಹೂವಾಗುವ ಥರ
ನನ್ನೊಳಗಿನ ಈ ಪ್ರೇಮ ಭಾವ ಅಜರಾಮರ
ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
ನೀನಾದೆ ನನ್ನ ಬಾಳ ರಥ ಸಾರಥಿ
ನಿನ್ನೊಲವಿಗೆ ನಾನಾದೆ ಎಂದೋ ಶರಣಾಗತಿ