Skip to content
Lyric
Dive
Public playlists
My playlists
Search
Sign in
Amma (Bonus Track)
Sadhu Kokila
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಅಮ್ಮ ನನ್ನ ಈ ಜನುಮ(ನನ್ನ ಈ ಜನುಮ)
ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ (ನಿನಗ್ಯಾರು ಸಮ)
ನನ್ನ ಜಗ ನೀನೆಯಮ್ಮ
ನಿನ್ನ ಆ ಲಾಲಿ ಪದ
ನನ್ನ ಒಳಗೆ ಸದಾ
ನಿಲ್ಲದೇ ಮಿಡಿದಿದೆ ಅಮ್ಮಾ
ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ
ಅಮ್ಮ ನನ್ನ ಈ ಜನುಮ
ನಿನ್ನ ವರದಾನವಮ್ಮ
ಅಮ್ಮ
ನಿನ್ನ ಒಂದು ಕೈತುತ್ತು ಸಾಕು
ಈ ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು
ಆ ನೆನಪಿನಲ್ಲೇ ಸೆರೆವಾಸ ಇರುವೆನು
ನೀನೇ ನನ್ನ ಲೋಕವು
ನೀನೇ ನನ್ನ ಜೀವವು
ನೀನೇ ನನಗೆ ಎಲ್ಲವೂ ಅಮ್ಮ
ಅಮ್ಮಾ ನನ್ನ ಈ ಜನುಮ
ನಿನ್ನ ವರದಾನವಮ್ಮ
ಅಮ್ಮಾ
ರಾರಾರಿ ರಾರಿರೋ
ರಾರಾರಿ ರಾರೋ
ನಿನ್ನ ಒಂದು ಸಾಂತ್ವಾನವೇ ಸಾಕು (ಸಾಕು)
ನೋವನೆಲ್ಲಾ ನಾ ನುಂಗಿ ನಗುವೆನು
ನಿನ್ನ ಒಂದು ಬೆನ್ತಡವು ಸಾಕು
ಈ ಜಗವನೆಲ್ಲಾ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವ ಮರೆತೆನು ಅಮ್ಮಾ
ಅಮ್ಮಾ, ನನ್ನ ಈ ಜನುಮ (ನನ್ನ ಈ ಜನುಮ)
ನಿನ್ನಾ ವರದಾನವಮ್ಮ
ಅಮ್ಮ ನಿನಗ್ಯಾರು ಸಮ (ನಿನಗ್ಯಾರು ಸಮ)
ನನ್ನ ಜಗ ನೀನೆಯಮ್ಮಾ
ನಿನ್ನ ಆ ಲಾಲಿ ಪದ ನನ್ನಒಳಗೆ ಸದಾ ನಿಲ್ಲದೇ ಮಿಡಿದಿದೆಯಮ್ಮಾ
ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ
ಅಮ್ಮಾ