Skip to content
Lyric
Dive
Public playlists
My playlists
Search
Sign in
Jingo Monologue (From "Jingo")
Navaneeth Sham, Raghavendra Mayakonda
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಒಂದು ಸೊಂಪಾದ ತೋಟ
ಅಲ್ಲಿ ಹಾಲೆ ಸೊಪ್ಪು, ಅಣ್ಣೆ ಸೊಪ್ಪು, ಸೀಗೆ ಕುಡಿ ತಿಂದುಕೊಂಡು
ಒಂದು ಕುರಿ ಹಿಂಡು ನೆಮ್ಮದಿಯಾಗಿ ಬದುಕ್ತಾ ಇತ್ತು
ಆ ಹಿಂಡಿನ ಮೇಲೆ ಕಣ್ಣಾಕಿ ಒಂದು ತೋಳದ ಗುಂಪು ಹೊಂಚ್ ಹಾಕೊಂಡು ಕಾಯ್ತಾ ಇತ್ತು
ಇನ್ನೊಂದು ಕಡೆ ಕಿರುಬಗಳು ಕುರಿ ಎಳೆ ಮಾಂಸ ಕಂಡು ನಾಲಿಗೆ ಚಪ್ಪರಿಸ್ತಾ ಇದ್ವು
ಮತ್ತೊಂದು ಕಡೆ ಚಿರತೆ ಕುರಿ ಗೋಣು ಮುರಿಯೋದಕ್ಕೆ ಹಾತೊರಿತಾ ಇತ್ತು
ನನಿಗೆ ಸಿಂಹ ಬಾಲು ಬೇಕು ಅಂತ ಒಂದು ಸಿಂಹ ಸವಾಹಾಕ್ತು
ತೋಟದ ಬಾಗಿಲಲ್ಲಿ ನಿಂತ್ಕೊಂಡು ಒಂದು ಹೆಬ್ಬುಲಿ ಬೋರ್ಗುಡಕ್ಕೆ ಶುರು ಮಾಡ್ತು
ಹೀಗೆ ಶತ್ರುಗಳು ಹಲ್ಲು ಮಸಿತ
ನಾ ಮುಂದು ತಾ ಮುಂದು ಅಂತ ತೋಟದ ಸುತ್ತಲೂ ಸುತ್ತಾಕ್ತಾ ಇದ್ವು
ಪಾಪ ಕುರಿಗಳು ಊರಿಗೆ ಬಂದಿರೋ ಮಾರಿ ಎದುರು ಉಸಿರಾಡಕ್ಕೆ ಆಗದೆ
ಬ್ಯಾ ಅಂತ ಗಡಗಡ ನಡುಗುತ್ತಿದ್ರೆ
ಶತ್ರುಗಳ ಮೈಯೆಲ್ಲಾ ಬಾಯಾಗಿ ಕಾಯ್ತಿದ್ವು ಆದರೆ ಅವುಕ್ಕೇನು ಗೊತ್ತಿತ್ತು?
ಪಾಪದ ಕುರಿಗಳನ್ನ ಕಾಯೋಕೆ, ಶತ್ರುಗಳಿಗೆ ಗೂಟ ಹೊಡೆಯೋಕೆ
ಬಗುನಿ ಮರದ ತರ ಒಬ್ಬ ಉದ್ದಕ್ಕೆ ಅಲ್ಲೇ ನಿಂತಿದ್ದಾನೆ ಅಂತ
ಇವತ್ತು ನಮ್ಮ ರಕ್ತದ ರುಚಿ ನೋಡೋಕೆ ಹೊಂಚಾಕ್ತಾ ಇರುವಂತ ವೈರಿಗಳು
ನಮ್ಮ ನಿಮ್ಮ ನಡುವೆನೇ ಇದಾವೆ
ಆದರೆ ಅಂತ ನೂರು ತೋಳುಗಳ ಹಿಂಡೆ ಬರಲಿ, ಸಾವಿರ ಹೆಬ್ಬುಲಿಗಳ ದಂಡೆ ಬರಲಿ
ನನ್ನ ಎದೆ ಒಡ್ದಿ ನಿಮ್ಮನ್ನ ಕಾಯ್ತೀನಿ
ಬನ್ನಿ, ನಾನು ಗಂಡು ಬೇರುಂಡನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು
ನಾನು ಬೆಂಕಿಯಾಗಿ ಉರಿತಾ ಇದ್ರೆ ಬೀಸು ಬೀಸು ಗಾಳಿ ನೀವಾಗಿರಬೇಕು
ಬೇಕಿದ್ರೆ ನಿಮ್ಮನ್ನ ಕಾಯ್ತಾ ಇರೋ ಈ ಬಗನಿ ಮರವನ್ನ ಬಗೆದು ಒನಕೆ ಮಾಡ್ಕೊಳ್ಳಿ
ಶಾಂತಿಯ ತೋಟದ ಹಣ್ಣಿಗೆ ಬೆಲೆ ಇಲ್ಲ
ನಾವು ಈಗ ಹುಟ್ಟು ಮಿಚ್ಚಬೇಕಾಗಿರೋದು
ಕ್ರಾಂತೀಯ ತೋಟಾ