Skip to content
Lyric
Dive
Public playlists
My playlists
Search
Sign in
Mussanje Veleyali
V. Harikrishna
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ
ಜೊತೆಯಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ
ಒಲವಿಲ್ಲದಾ ಒಡಲೆಲ್ಲಿದೆ ತಾಯಿಲ್ಲದಾ ಮಡಿಲೆಲ್ಲಿದೆ
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ
ಜೊತೆಯಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ
ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ
ಕಳೆದು ಹೋಗೋ ಮುನ್ನ ಕೈ ಸೇರಬಾರದೆ
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ
ಏನೆಂದು ನೀನೊಮ್ಮೆ ಕೇಳಬಾರದೆ
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ
ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ
ಚೂರಗದಾ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ
ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ
ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ
ಬಡಿತಗಳ ಕೈ ತುತ್ತ ನೀಡಬಾರದೆ
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ
ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ
ಈಗಾಗಲೇ ನೋವಾಗದೇ
ದೂರಾಗಲು ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವು ಬೀಳುತ್ತಿದೆ
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ
ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ