Skip to content
Lyric
Dive
Public playlists
My playlists
Search
Sign in
Maayavi Kanase
Karthik, Shreya Ghoshal, Judah Sandhy
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ನಾನು ಮಾತ್ರ ಕೇಳುವಂತೆ ಕದ್ದು ನೀನು ಮೆಲ್ಲಗೆ
ಕೂಗಿದಂತೆ ಭಾಸವಾಗಿದೆ
ಎಂದಿಗಿಂತ ನಿನ್ನ ಮೇಲೆ ಉಕ್ಕಿ ಬಂದ ಭಾವನೆ
ನನ್ನ ಮಂದಹಾಸವಾಗಿದೆ
ಹಚ್ಚೆಯಂತೆ ಜೀವಕೆ, ಹಚ್ಚಿಕೊಂಡೆ ನಿನ್ನನು
ಹುಚ್ಚನಾಗೋ ಮುಂಚೆಯೇ ಸಿಗಲಾರೆಯೇನು?
ಮಾಯಾವಿ ಕನಸೇ, ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೇ ನಿನಗಾಗಿ ಕಾದೆನು
ಪ್ರೀತಿಯಿಂದ ನನ್ನ ತೀರಿಸು
ಶುರುವಾಗಿದೆ ನೋಡು ಬಿರುಗಾಳಿಯು ನಿನ್ನ ಪಿಸುಮಾತಿಂದ
ಅಭಿಸಾರಿಕೆ ನೀನು ಕರೆಯೋಲೆಯ ನೀಡು ತುಸು ದೂರಿಂದ
ಗಾಯ ಮಾಯಿಸೋ ಸ್ಪರ್ಶ ನಿನ್ನದು
ಮೌನ ಎಂದಿಗೂ ಹೇಳಿ ತೀರದು
ಬಳಿ ಬಂದಿರೋ ಮೋಡಗಳು
ಮಳೆ ಮಂಟಪ ಹಾಕುತಿವೆ
ಅಭಿಲಾಷೆಯ ಸಾವಿರ ಅಲೆಗಳು ನನ್ನನು ನಿನ್ನೆಡೆ ನೂಕುತಿವೆ
ಮಾಯಾವಿ ಕನಸೇ
ಒಲವೇ ನಾನು ಮರೆತೇ ಹೋದೆ ಊರು
ನೀ ಹೇಳು ನಿಜಕೂ ನಾನು ಯಾರು
ಬೆರಗಾಗಲಿ ಲೋಕ ನಮ್ಮ ಶೈಲಿಗೆ
ಬೆಳದಿಂಗಳೇ ದೀಪ ನಮ್ಮ ದಾರಿಗೆ
ಮಾಯಾವಿ ಕನಸೇ, ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೇ ನಿನಗಾಗಿ ಕಾದೆನು
ಓ, ಪ್ರೀತಿಯಿಂದ ನನ್ನ ತೀರಿಸು