Skip to content
Lyric
Dive
Public playlists
My playlists
Search
Sign in
Rangoli
Sanjith Hegde
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ರಂಗೋಲಿ... ಅಂಗಾಲಿನಲ್ಲಿ ಚಂದ ಮರಿ ಹಾಕಿದೆ
ಕೆನ್ನೇಲಿ... ಮುಸ್ಸಂಜೆ ಬಾನಿನಂತ ನಸುಗಂಪಿದೆ
ಜೀವದಲಿ ಇಟ್ಟು ನಿನ್ನನ್ನ
ಮಾಡುವೆನು ತುಂಬಾ ಜೋಪಾನ
ಮಾತೇ ಇಲ್ಲ ಹೇಳೋದಕ್ಕೆ ಮನದಿಂಗಿತ
ಮಾತಿಗಿಂತ ಮುತ್ತೆ ಈಗ ಸಮಯೋಚಿತ
ಹ್ಮ್ ಹ್ಮ್... ಆಹಹ
ಕಿಚ್ಚಿ ಕುಚ್ಚಿ ಕುಚ್ಚಿ ಕಿಚ್ಚಿ ಕಿಚ್ಚಿ ಮಾಡಲ
ರಂಗೋಲಿ... ಅಂಗಾಲಿನಲ್ಲಿ ಚಂದ ಮರಿ ಹಾಕಿದೆ
ಕೆನ್ನೇಲಿ... ಮುಸ್ಸಂಜೆ ಬಾನಿನಂತ ನಸುಗಂಪಿದೆ
ಹ್ಮ್ ಕಾಡಿನಲ್ಲೀ ಕಾಲುದಾರಿಯಲ್ಲಿ
ಬೀಸುವ ತಂಗಾಳಿ ಹಾಗೆ
ನೀನು ಬಂದ ಮೇಲೆ ಬಾಳಿನಲ್ಲಿ
ಉಲ್ಲಾಸ ಉತ್ಸಾಹ ಹೀಗೆ
ಚಂದಿರನ್ನೇ ತಂದಿಡುವೆ
ಬೆಳದಿಂಗಳನ್ನೂ ನೀನು ಬೇಡಲು
ಬೇರೆ ಸುಖ ಬೇಕಾಗಿಲ್ಲ
ಈ ಮಂದಹಾಸ ನಂಗೆ ಮೀಸಲು
ತಾರೆಗಳ ತೇರಾ ಮೇಲೆ ನೀ
ತೇಲಿಸುವೆ ನಿನ್ನ ಇರುಳೆಲ್ಲಾ
ಮಾತೇ ಇಲ್ಲ ಹೇಳೋದಕ್ಕೆ ಮನದಿಂಗಿತ
ಮಾತಿಗಿಂತ ಮುತ್ತೆ ಈಗ ಸಮಯೋಚಿತ
ಹ್ಮ್ ಹ್ಮ್... ಆಹಹ
ಕಿಚ್ಚಿ ಕುಚ್ಚಿ ಕುಚ್ಚಿ ಕಿಚ್ಚಿ ಕಿಚ್ಚಿ ಮಾಡಲ
ಜೀವಕ್ಕೆನೇ ರೂಡಿಯಾಗಿ ಹೋದ
ಮುದ್ದಾದ ಹವ್ಯಾಸ ನೀನು
ನಿದ್ದೆಯಲ್ಲೂ ತಪ್ಪಿ ಹೋಗದಂಥ
ಆತ್ಮದ ಅಭ್ಯಾಸ ನೀನು
ನನ್ನಾಣೆಗೂ ಬೀಡಲಾರೆನು
ಒಂಚೂರು ನೋವು ನಿನ್ನ ಸೋಕಲು
ನಿನ್ನಿಂದಲೇ ತೆರದಂತಿದೆ
ಹೊಸದಾದ ಲೋಕ ಒಂದು ಬಾಗಿಲು
ಪುಣ್ಯ ಕಣೇ ನಿನ್ನ ಈ ಪ್ರೇಮ
ಧನ್ಯ ಕಣೇ ನನ್ನ ಈ ಜನ್ಮ
ಮಾತೇ ಇಲ್ಲ ಹೇಳೋದಕ್ಕೆ ಮನದಿಂಗಿತ
ಮಾತಿಗಿಂತ ಮುತ್ತೆ ಈಗ ಸಮಯೋಚಿತ
ಹ್ಮ್ ಹ್ಮ್... ಆಹಹ
ಕುಚ್ಚಿ ಕಿಚ್ಚಿ ಗುಚ್ಚಿ ಕಿಚ್ಚಿ ಕಿಚ್ಚಿ ಮಾಡಲ
ರಂಗೋಲಿ... ಅಂಗಾಲಿನಲ್ಲಿ ಚಂದ ಮರಿ ಹಾಕಿದೆ
ಕೆನ್ನೇಲಿ... ಮುಸ್ಸಂಜೆ ಬಾನಿನಂತ ನಸುಗಂಪಿದೆ