Skip to content
Lyric
Dive
Public playlists
My playlists
Search
Sign in
Inthi Ninna Preetiya
Nanditha
,
Sonu Nigam
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತಾ ಕಣ್ಣಲ್ಲೇ ಬರೀತಾಳೆ ಒಲೆಯ
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ
ನಗುತಾ ಸನ್ನೇಲಿ ಕರೀತಾನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತೀ ಅತೀ ಸಿಹಿ ಶುಭಾಶಯ
ಪ್ರೀತಿ ಪ್ರತೀ ಪದ ಶುಭಾಶಯ
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತಾ ಕಣ್ಣಲ್ಲೇ ಬರೀತಾಳೆ ಒಲೆಯ
ಜೊತೆಯಾಗಿ ಬಹು ದೂರ ಹೋಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲಾ
ತುಸು ದೂರ ನಸು ನಕ್ಕು ಸಾಗೊಣ
ಪ್ರೀತಿನ ಪತ್ತೆ ಮಾಡೋ ಹಂಬಲ
ಇವನ್ಯಾರೋ ಬೈರಾಗಿ
ಬಂದಾನೋ ನನಗಾಗಿ
ಬಿಡಿಗಾಸು ಬದಲಾಗಿ
ನನ ಮೇಲೆ ಮನಸಾಗಿ
ಕಣ್ಣಾ ಜೋಳಿಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
ಅತೀ ಅತೀ ಸಿಹಿ ಸುಳ್ಳುಗಳು
ಇದೆ ನಿಜ ಅನ್ನೋ ಪ್ರೇಮಿಗಳು
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ
ನಗುತಾ ಸನ್ನೇಲಿ ಕರಿತಾನೆ ಮಾರಾಯ
ತುಂಬಾನೇ ಹುಷಾರಾಗೆ ಇದ್ದೆನು
ಹಾಗಿದ್ದು ನಾ ಪ್ರೀತೀಲಿ ಬಿದ್ದೆನು
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೋ ಇನ್ನೂ ಕಾಲ ಕೇಳಿತು
ಮನಸೇಳೋ ವಿಷಯಾನ
ಮರಿಯೋದು ಸರಿಯೆನಾ
ಕೊಡು ಬಾರೆ ಹೃದಯಾನ ಬಿಡು ನಿನ್ನ ಬಿಗುಮಾನ
ನನ್ನ ನಲ್ಮೆಯ ನಲ್ಲೇ ನಮ್ಮಯ ಪ್ರೀತಿ ವಿಸ್ಮಯ
ಅತೀ ಅತೀ ಸಿಹಿ ಕವಿತೆಗಳು
ಇದೆ ನಿಜ ಅನ್ನೋ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತಾ ಕಣ್ಣಲ್ಲೇ ಬರೀತಾಳೆ ಒಲೆಯ
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ
ನಗುತಾ ಸನ್ನೇಲಿ ಕರೀತಾನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತೀ ಅತೀ ಸಿಹಿ ಶುಭಾಶಯ
ಪ್ರೀತಿ ಪ್ರತೀ ಪದ ಶುಭಾಶಯ