Endendu Ninnanu Maretu
P. B. Sreenivas, Vani Jayaram
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ... ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ
ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ