Skip to content
Lyric
Dive
Public playlists
My playlists
Search
Sign in
Bareyadha Geetheya
Sonu Nigam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಬರೆಯದ ಗೀತೆಯ ಗುಣುಗಿದೆ ಈ ಹೃದಯ
ಮಡಿಸಿದ ಕಾಗದ ತೆರೆಯದೇ ಓದುವೆ ನಾ
ಬರುವೆನು ಸುಮ್ಮನೆ ಎಲ್ಲೇ ನೀ ಹೋದರು
ನಗುವೆಯಾ ಈಗಲಾದರೂ?
ಬರೆಯದ ಗೀತೆಯ ಗುಣುಗಿದೆ ಈ ಹೃದಯ
ಮಡಿಸಿದ ಕಾಗದ ತೆರೆಯದೇ ಓದಲಾರೆಯಾ?
ಸನಿಹದಲೇ ಕೂತಿರು ಸವಿಗನಸ ಸೋಕಲೇ
ಅಳಿಸಿಬಿಡು ನೋವಿನ ನೆನಪುಗಳ ದಾಖಲೆ
ಚಿಗುರುವೆ ನಿನ್ನಯ ಛಾಯೆಯ ಕಂಡರೂ
ಸಿಗುವೆಯಾ ಈಗನಾದರೂ?
ಬರೆಯದ ಗೀತೆಯ ಗುಣುಗಿದೆ ಈ ಹೃದಯ
ಮಡಿಸಿದ ಕಾಗದ ತೆರೆಯದೇ ಓದಲಾರೆಯಾ?
ನಯನದಲೇ ನಿಂತಿದೆ ಹನಿಗವಿತೆ ಕೋಮಲ
ಅದರೊಳಗೆ ಮಿಂಚಲು ಅನುಮತಿಯ ಕೋರಲಾ?
ಸಹಿಸೆನು ಎಂದಿಗೂ ಚೂರೂ ನೀ ನೊಂದರು
ಒಲಿವೆಯಾ ಈಗಲಾದರೂ?
ಬರೆಯದ ಗೀತೆಯ ಗುಣುಗಿದೆ ಈ ಹೃದಯ
ಮಡಿಸಿದ ಕಾಗದ ತೆರೆಯದೇ ಓದಲಾರೆಯಾ?