Skip to content
Lyric
Dive
Public playlists
My playlists
Search
Sign in
Saaluthillave
Shreya Ghoshal
Popularity · High
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಒಂದೇ ಸಮನೆ ನಿನ್ನಾ ನೋಡುತಿದ್ದ ಮೇಲೂ
ತುಂಬ ಸಲುಗೆಯಿಂದಾ ಬೆರೆತು ಹೋದ ಮೇಲೂ
ಪಕ್ಕದಲ್ಲಿ ಕುಳಿತುಕೊಂಡು
ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದ ಮೇಲೂ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಮುಂಜಾನೆ ನನ್ನ ಪಾಲಿಗಂತೂ ಸಾಲೋಲ್ಲ
ಮುಸ್ಸಂಜೆ ತನಕ ಸನೀಹವಂತೂ ಸಾಲೋಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲ ಭೇಟಿ ನೆನೆದಾ ಮೇಲೂ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ
ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
ಸಲ್ಲಾಪದಲ್ಲೂ ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೋಲ್ಲ
ಏಳು ಸ್ವರವು ಮುಗಿದ ಮೇಲೂ
ಕಾಡುವಂಥ ನನ್ನ ನಿನ್ನ
ಯುಗಳ ಗೀತೆ ಮುಗಿಯೋದಿಲ್ಲ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ
ಶ್ವಾಸದಲ್ಲಿ ನೀನು ವಾಸವಿದ್ಧ ಮೇಲೂ
ನನ್ನ ಹೃದಯವನ್ನು ಹಾಯಾಗಿ ಕದ್ಧ ಮೇಲೂ
ಎರಡು ಹೃದಯ ಬೆರೆತ ಮೇಲೂ
ಹಾಡು ಮುಗಿದು ಹೋದ ಮೇಲೂ
ಮೌನ ತುಂಬಿ ಬಂದ ಮೇಲೂ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ