Naa Naguva Odaleny
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ

ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ
ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೀ ಹೃದಯ
ನನಗೇತಕೆ ನನ ಮೇಲೆಯೇ ಈ ಸಂಶಯ
ಬರೀ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೆ ಪ್ರೀತಿ ಎಂದು ನೀ ನನಗೆ