Skip to content

Sougandhika - Duet

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಸನಿಹ ಸೊಕಿ ಬಯಕೆ ಬೆವರಿದೆ ಒಲವು ಸರಿದು ಬಳಿಯೇ ಕುಳಿತಿದೆ ಬೆಸೆಯಿತು ತುಸು ಸಲಿಗೆಯು ಪದಗಳ ಹೊಸ ಬಳಕೆಯು ಕದಲಿದೆ ಮೈಮನ ನಿನ್ನ ಸಲಿಗೆ ಸಿಲುಕಿ ಇನ್ನು ಇರುಳ ಮಾತು ಬಹಳ ಸಾಂದರ್ಭಿಕ ಗಂಧ ಬಳಿದ ಕೆನ್ನೆ ಗುಳಿಯೇ ಸೌಗಂಧಿಕ ಪದೆ ಪದೆ ನಿನ್ನಾ ಜಪ, ಮರೆಸುತಿದೆ ಗೂಡು ಅದೇ ಅದೇ ನಿನ್ನಾ ಕೃತಿ, ಬರೆಸುತಿದೆ ಹಾಡು ಅಮಲು ಏರಿತೀಗ, ಸವಿದು ನಿನದೇ ಲಹರಿ ಸುಮವು ಬಾಗಿತೀಗ, ಒರಗಿ ಚಂದದ ಭ್ರಮರಿ ನಾಚಿಕೆಯು ಇನ್ನೂ ಸಡಿಲ ನಲುಗಿ ಅರಳುತಿದೆ ಕಾಮನೆಯ ಕಮಲ... ಆಳ ಭಾವಕ್ಕಿಲ್ಲ ಬೇಲಿ, ಕನಸು ಪೂರ್ತಿ ನೀಲಿ ಕದಲಿದೆ ಯೌವ್ವನ ನಿನ್ನಾ ಒಲವ ಬಯಸಿ ಇನ್ನು ಇರುಳ ಮಾತು ಬಹಳ ಸಾಂದರ್ಭಿಕ ಗಂಧ ಬಳಿದ ಕೆನ್ನೆ ಗುಳಿಯೇ ಸೌಗಂಧಿಕ ನಾಳೆಯ ನೋವ ಕನಸೀಗ ಕಾಡಿದೆ ವ್ಯಾಪಕ ಹಾಳೆಯ ಒಂಟಿ ಸಾಲೀಗ ಹರಡಿದೆ ಸೂತಕ ವಿರಹ ರಮಿಸಿದೆ, ನೆನೆದು ನಿನ್ನ ಕೊರಗುತಾ ಬಯಕೆ ಮನದಲೆ, ಹಿಡಿದು ಮೌನ ಕರಗತಾ ಈ ಬಿಗುಮಾನವ ಒದ್ದಾಡುತಾ ಸ್ವೀಕರಿಸಿದೆ ಈ ತನವು ದಾಹಕ್ಕಿಲ್ಲ ಲಜ್ಜೆ, ಕಾದು ಕುಳಿತು ಸಂಜೆ ಕರಗಿದೆ ಯೌವ್ವನ ನಿನ್ನ ಮಿಲನ ಬಯಸಿ ಇನ್ನು ಇರುಳ ಮಾತು ಬಹಳ ಸಾಂದರ್ಭಿಕ ಗಂಧ ಬಳಿದ ಕೆನ್ನೆ ಗುಳಿಯೇ ಸೌಗಂಧಿಕ ಇನ್ನು ಇರುಳ ಮಾತು ಬಹಳ ಸಾಂದರ್ಭಿಕ ಗಂಧ ಬಳಿದ ಕೆನ್ನೆ ಗುಳಿಯೇ ಸೌಗಂಧಿಕ